ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್'ನಲ್ಲಿ ಜನಸಾಮಾನ್ಯರು ಭಾಗವಹಿಸಲು ಅವಕಾಶ ಕಲ್ಪಿಸಿದ್ದೇ ಈ ಬಾರಿ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರು 'ಕಾಮನ್ ಮ್ಯಾನ್'ಗಳಿಗೆ ಸ್ಪರ್ಧಿಗಳಾಗುವ ಗೋಲ್ಡನ್ ಚಾನ್ಸ್ ನೀಡಲಾಗಿತ್ತು.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗುತ್ತಿದ್ದ ಹಾಗೆ, ಸೆಲೆಬ್ರಿಟಿ ಸ್ಪರ್ಧಿಗಳು ಹಾಗೂ ಜನಸಾಮಾನ್ಯ ಸ್ಪರ್ಧಿಗಳ ನಡುವೆ ಕಂದಕ ನಿರ್ಮಾಣ ಆಯ್ತು. ಸೆಲೆಬ್ರಿಟಿ ಸ್ಪರ್ಧಿಗಳು ಲಿವಿಂಗ್/ಬೆಡ್ ರೂಮ್ ಏರಿಯಾದಲ್ಲೇ ಹೆಚ್ಚು ಕಾಲ ಕಳೆದರೆ, ಕಾಮನ್ ಮ್ಯಾನ್ ಸ್ಪರ್ಧಿಗಳು ಗಾರ್ಡನ್ ಏರಿಯಾಲ್ಲೇ ಠಿಕಾಣಿ ಹೂಡಿದರು. ಎರಡು ಗುಂಪುಗಳ ಮಧ್ಯೆ ಕಿತ್ತಾಟ ನಡೆದಿದ್ದೂ ಇದೆ.

''ಗುಂಪು ಇರಬಹುದು. ಆದ್ರೆ, ಯಾರ ಮನಸ್ಸಿನಲ್ಲಿಯೂ ಸೆಲೆಬ್ರಿಟಿ/ಕಾಮನ್ ಮ್ಯಾನ್ ಎಂಬ ಭೇದಭಾವ ಇಲ್ಲ. ಎಲ್ಲರೂ ಒಂದೇ'' ಎಂದು ಹಲವು ಸ್ಪರ್ಧಿಗಳು ಎಷ್ಟೇ ಬಾರಿ ಸ್ಪಷ್ಟನೆ ನೀಡಿದರೂ, ವೀಕ್ಷಕರು ಮಾತ್ರ ಅದನ್ನ ಪರಿಗಣಿಸಲೇ ಇಲ್ಲ.
There has always been differences between Common people and celebrities at Bigg Boss house .But the Celebrity versus Common Man controversy ends in Grand Finale.